ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು. ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು. == ವಂದೇಮಾತರಂನ ಖ್ಯಾತ ಭಾಗ == ವಂದೇ ಮಾತರಂ ವಂದೇ ಮಾತರಂ! ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ! ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ! ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ ಕೋಟಿ-ಕೋಟಿ-ಭುಜೈರ್ದೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ! == ಸಂಪೂರ್ಣ ಗೀತೆ == ವಂದೇ ಮಾತರಂ ವಂದೇ ಮಾತರಂ! ಸುಜಲಾಂ ಸುಫಲಾಂ ಮಲಯಜ-ಶೀತಲಾಂ ಸಸ್ಯ-ಶ್ಯಾಮಲಾಂ ಮಾತರಂ! ಶುಭ್ರ-ಜ್ಯೋತ್ಸ್ನಾ-ಪುಲಕಿತ-ಯಾಮಿನೀಂ ಫುಲ್ಲ-ಕುಸುಮಿತ-ದ್ರುಮದಲ-ಶೋಭಿನೀಂ ಸುಹಾಸಿನೀಂ ಸುಮಧುರ-ಭಾಷಿಣೀಂ, ಸುಖದಾಂ ವರದಾಂ ಮಾತರಂ! ಕೋಟಿ-ಕೋಟಿ-ಕಂಠ-ಕಲಕಲ-ನಿನಾದ-ಕರಾಲೇ ಕೋಟಿ-ಕೋಟಿ-ಭುಜೈರ್ಧೃತ-ಖರಕರವಾಲೇ ಅಬಲಾ ಕೇನ ಮಾ ಏತ ಬಲೇ ಬಹುಬಲ-ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ! ತುಮಿ ವಿದ್ಯಾ, ತುಮಿ ಧರ್ಮ, ತುಮಿ ಹೃದಿ ತುಮಿ ಮರ್ಮ, ತ್ವಂ ಹಿ ಪ್ರಾಣಾಃ ಶರೀರೇ, ಬಾಹು ತೇ ತುಮಿ ಮಾ ಶಕ್ತಿ ಹೃದಯೇ ತುಮಿ ಮಾ ಭಕ್ತಿ, ತೋಮಾರಈ ಪ್ರತಿಮಾ-ಗಡಿ-ಮಂದಿರೇ, ಮಂದಿರೇ ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ ಕಮಲಾ ಕಮಲಾದಲ-ವಿಹಾರಿಣೀ ವಾಣೀ ವಿದ್ಯಾ-ದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಂ, ವಂದೇ ಮಾತರಂ! ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ! === ‘ವಂದೇ ಮಾತರಂ’ ಗೀತೆಯ ಭಾವಾರ್ಥ === == ಬಾಹ್ಯ ಸಂಪರ್ಕಗಳು == " " , . " ?" 2004-08-24 ವೇಬ್ಯಾಕ್ ಮೆಷಿನ್ ನಲ್ಲಿ. - 1937 " " 2007-09-30 ವೇಬ್ಯಾಕ್ ಮೆಷಿನ್ ನಲ್ಲಿ. - 2009-09-23 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==